ಬಬಲೇಶ್ವರ: ದಾಸ್ಯಾಳ ಬಳಿ ಬೇವಿನ ಮರದಿಂದ ಹಾಲಿನ ಮಾದರಿಯ ನೊರೆ, ಪೂಜೆಗೆ ಮುಗಿ ಬೀಳುತ್ತಿರುವ ಜನರು
ಬೇವಿನ ಮರದಿಂದ ಹಾಲಿನ ಮಾದರಿಯ ನೊರೆ ಬರುತ್ತಿದ್ದು ಪೂಜೆಗೆ ಜನರು ಮುಗಿ ಬೀಳುತ್ತಿದ್ದಾರೆ. ವಿಜಯಪುರ ಜಿಲ್ಲೆಯ ದಾಸ್ಯಾಳ ಗ್ರಾಮದ ಬಳಿ ಘಟನೆ ನಡೆದಿದೆ. ದಾಸ್ಯಾಳ-ಕೋಟ್ಯಾಳ ಗ್ರಾಮಗಳ ನಡುವೆ ಇರುವ ಲಗಮವ್ವ ದೇವಿ ದೇಗುಲದ ಪಕ್ಕದ ಬೇವಿನ ಮರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಹಾಲಿನ ಮಾದರಿಯ ನೊರೆ ಸುರಿಯುತ್ತಿದೆ. ಇದನ್ನ ದೇವಿ ಪವಾಡ ಎನ್ನುತ್ತಿದ್ದಾರೆ ಸ್ಥಳೀಯರು. ಬೇವಿನ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಜನ ಮರುಳೋ ಜಾತ್ರೆ ಮರುಳೋ..