ಚಾಮರಾಜನಗರ: ಧಾರ್ಮಿಕ ಕ್ಷೇತ್ರದ ಬಗ್ಗೆ ಶೀಳ್ಳೆ ಹೊಡೆಯುವುದೇ ಸಿ.ಟಿ.ರವಿ ಕೆಲಸ : ನಗರದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮಾತನಾಡಿ ಧಾರ್ಮಿಕ ಕ್ಷೇತ್ರದ ಬಗ್ಗೆ ಶೀಳ್ಳೆ ಹೊಡೆಯುವುದೇ ಸಿ.ಟಿ.ರವಿ ಅವರ ಅಭ್ಯಾಸವಾಗಿದೆ ಇದು ಕೆಟ್ಟ ಗುಣ, ನಾವೆಲ್ಲ ಭಾರತೀಯರು ಯಾರೇ ಪಾಕಿಸ್ತಾನ ಜಿಂದಾಬಾದ್ ಅಂದರೆ ಅದನ್ನು ಒಪ್ಪುವುದಕ್ಕೆ ಆಗಲ್ಲ. ಇದಕ್ಕೆ ಸಂವಿಧಾನ ಪೀಠಿಕೆ ಬಿಜೆಪಿಯವರ ತಲೆಯಲ್ಲಿ ಬರಲಿಲ್ಲ, ಭಾರತದ ಸಂವಿಧಾನವನ್ನು ಈಗಿನ ಒಂದನೇ ತರಗತಿ ಮಕ್ಕಳು ಹೇಳುವುದನ್ನಾ ಮಾನ್ಯ ಸಿದ್ದರಾಮಯ್ಯ ಸರ್ಕಾರ ಇವತ್ತು ಮಾಡಿದ್ದೇವೆ. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಎಲ್ಲರ ಬಾಯಲ್ಲಿ ಹಾಗೂ ಮನಸ್ಸಲ್ಲಿ ಇದ್ದರೆ ಮಾತ್ರ ಇಂತಹ ವ್ಯವಸ್ಥೆ ಕಮ್ಮಿ ಆಗುತ್ತದೆ ಇಂತಹ ಹೇಳಿಕೆಗಳು ಇಂತವರಿಂದ ಕಮ್ಮಿ ಆಗುತ್ತದೆ ಎಂದರು