ಗದಗ: ನಗರದಲ್ಲಿ ಕೊಲೆ ಆರೋಪಿ ದರ್ಶನ್ ಪೋಟೊ ಪ್ರದರ್ಶಿಸಿ ಹುಚ್ಚಾಟ ಮೇರೆದ ಯುವಕ
Gadag, Gadag | Sep 17, 2025 ಕೊಲೆ ಆರೋಪಿ ದರ್ಶನ್ ಫೋಟೋ ಪ್ರದರ್ಶಿಸಿ ಯುವಕನೊಬ್ಬ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಹುಚ್ಚಾಟ ಮೆರೆದಿದ್ದಾನೆ. ಗದಗ ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಯುವಕನೊಬ್ಬ ಸ್ನೇಹಿತನ ಭುಜದ ಮೇಲೆ ಕೂತು ಕೊಲೆ ಆರೋಪಿ ದರ್ಶನ್ ಪೋಟೋ ಪ್ರದರ್ಶಿಸಿದ್ದಾನೆ. ಅಲ್ದೆ, ಡಿಜೆ ಸದ್ದಿಗೆ ಡ್ಯಾನ್ಸ್ ಮಾಡಿದ್ದಾನೆ. ಸದ್ಯ ಯುವಕನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಲೆ ಆರೋಪಿ ಫೋಟೋ ಪ್ರದರ್ಶನ ಮಾಡ್ಬೇಕಿತ್ತಾ ಅಂತಾ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.