ಮೊಳಕಾಲ್ಮುರು: ನವರಾತ್ರಿ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಗೊಂಬೆಗಳ ಪೂಜೆ:ಕಣ್ಮನ ಸೆಳೆದ ಗೊಂಬೆಗಳ ಲೋಕ
ಮೊಳಕಾಲ್ಮುರು:-ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆಮಾಡಿದೆ. ಪ್ರಾದೇಶಿಕತೆ ತಕ್ಕಂತೆ ಈ ಹಬ್ಬವನ್ನು ವಿಭಿನ್ನ, ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತಿದೆ. ಅದಕ್ಕೆ ಪೂರಕವಾಗಿ ಮೊಳಕಾಲ್ಮುರು ಪಟ್ಟಣದಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲಾಗುತ್ತಿದ್ದು, ಪಟ್ಟಣದ ಶೈಲಜಾ ಮತ್ತು ಕಟುಕರ ವೆಂಕಟೇಶ್ ದಂಪತಿಗಳ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಗೊಂಬೆಗಳು ಎಲ್ಲರ ಗಮನ ಸೆಳೆಯುತ್ತಿವೆ. ನವರಾತ್ರಿ ಅಂಗವಾಗಿ ಇವರ ತಾತಂದಿರ ಕಾಲದಿಂದಲೂ ಇವರು ಮನೆಯಲ್ಲಿ ಗೊಂಬೆಗಳನ್ನು ಪ್ರತಿಷ್ಠಾಪಿಸುತ್ತಿದ್ದು, ದಸರಾ ಸಂದರ್ಭದಲ್ಲಿ ಇವರ ಮನೆ ಗೊಂಬೆಗಳ ಮ್ಯೂಸಿಯಂನಂತೆ ಭಾಸವಾಗುತ್ತದೆ.