ದಾವಣಗೆರೆ: ಸಂಸದ ಡಿ.ಕೆ ಸುರೇಶ್ ಠೇವಣಿ ಕಳೆದುಕೊಳ್ಳಲಿದ್ದಾರೆ: ನಗರದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರವಾಲ್
ಸಂಸದ ಡಿ.ಕೆ ಸುರೇಶ್ ಠೇವಣಿ ಕಳೆದುಕೊಳ್ಳಲಿದ್ದು, 6 ಲಕ್ಷ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಮಂಜುನಾಥ್ ಗೆಲ್ಲಲಿದ್ದಾರೆ ಎಂದು ನಗರದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಹೇಳಿದ್ದಾರೆ. ಗ್ಯಾರಂಟಿಯಾಗಿ ಹೇಳುತ್ತೇನೆ ಡಿ.ಕೆ ಸುರೇಶ್ ಅವರ ಠೇವಣಿ ಕಳೆದುಕೊಳ್ಳುತ್ತಾರೆ. ಡಿ.ಕೆ ಕಂತೆ ಕಂತೆ ಹಣ ಚೆಲ್ಲಿ ಗೆಲ್ಲುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ನಮ್ಮ ಅಭ್ಯರ್ಥಿ ಮಂಜುನಾಥ್ ಒಂದು ಪೈಸೆ ಖರ್ಚು ಮಾಡದೇ ಗೆಲ್ಲುತ್ತಾರೆಂದು ದಾವಣಗೆರೆಯಲ್ಲಿ ಸುದ್ದಿಗಾರರ ಮುಂದೆ ಮಾಹಿತಿ ನೀಡಿದರು.