ಭಾಲ್ಕಿ: ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಶತಮಾನೋತ್ಸವ ನಿಮಿತ್ತ ಪಥ ಸಂಚಲನ ಜರುಗಿತು. ಪಟ್ಟಣದ ಭಾಲ್ಕೆಶ್ವರ ಮಂದಿರದಿಂದ ಮುಖ್ಯ ರಸ್ತೆ ಮಾರ್ಗವಾಗಿ ಹಿರೇಮಠ ಸಂಸ್ಥಾನ, ಚೌಡಿ ಮೂಲಕ ಮಹಾತ್ಮ ಬೊಮ್ಮಗೊಂಡೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಪಾಪ್ವ ವೃತ್ತ, ಬಸವೇಶ್ವರ ವೃತ್ತದಿಂದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದ ಪಕ್ಕದ ಮೈದಾನದ ವರೆಗೆ ಪಥ ಸಂಚಲನ ಜರುಗಿತು. ಸಂಘದ ಪ್ರಮುಖರಾದ ದಯಾನಂದ ಪವಾರ, ಶಿವು ಲೋಖಂಡೆ, ಸತೀಶ ಮುದಾಳೆ, ಶಿವಲಿಂಗ ಕುಂಬಾರ ಪಾಲ್ಗೊಂಡಿದ್ದರು