ರಾಯಚೂರು: ಎಲೆಬಿಚ್ಚಾಲಿ ಅಂಗನವಾಡಿಗೆ ಜಂಟಿ ಕಾರ್ಯದರ್ಶಿ ಭೇಟಿ ಆಹಾರ ಗುಣಮಟ್ಟ ಪರಿಶೀಲನೆ
ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಪ್ರಿತಮ್ ಬಿ.ಯಶವಂತ ಅವರು ರಾಯಚೂರು ಜಿಲ್ಲೆಗೆ ಗುರುವಾರ 11 ಗಂಟೆಗೆ ಭೇಟಿ ನೀಡಿ, ಅಂಗನವಾಡಿಗಳಲ್ಲಿನ ಶೈಕ್ಷಣಿಕ ಸ್ಥಿತಿಗತಿ, ಐಸಿಡಿಎಸ್ ಮತ್ತು ಇತರೆ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಮೊದಲಿಗೆ ರಾಯಚೂರು ಗ್ರಾಮೀಣ ಪ್ರದೇಶದ ಎಲೆಬಿಚ್ಯಾಲಿ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೀಡುವ ಸೌಕರ್ಯಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದುಕೊಂಡು, ಕೇಂದ್ರದಲ್ಲಿ ಸಿದ್ಧಪಡಿಸಿದ್ದ ಆಹಾರದ ಗುಣಮಟ್ಟ ಪರಿಶೀಲಿಸಿದರು.