ಅಣ್ಣಿಗೇರಿ: ಬಸವಾದಿ ಶರಣರು ಪ್ರತಿಪಾದಿಸಿದ ವಿಷಯಗಳು ಶ್ರೇಷ್ಠವಾಗಿವೆ: ಅಣ್ಣಿಗೇರಿ ತಾಲೂಕಿನ ಅಡ್ನೂರ ಗ್ರಾಮದಲ್ಲಿ ಶಾಸಕ ಎನ್.ಎಚ್ ಕೋನರಡ್ಡಿ
ಬಸವಾದಿ ಶರಣರು ಪ್ರತಿಪಾದಿಸಿದ ವಿಷಯಗಳು ಶ್ರೇಷ್ಠವಾಗಿವೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ತಿಳಿಸಿದರು. ಅಣ್ಣಿಗೇರಿ ತಾಲೂಕಿನ ಅಡ್ನೂರ ಗ್ರಾಮದಲ್ಲಿ ಅಣ್ಣಿಗೇರಿ ತಾಲೂಕ ಪ್ರಥಮ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣ ಸಮಾನತೆ ಜಾರಿಗೆ ತಂದರು. ಅನುಭವ ಮಂಟಪ ಮೂಲಕ ತಮ್ಮ ವಿಚಾರ ಪ್ರತಿಪಾದಿಸಿದರು ಎಂದರು.