ಹುಣಸಗಿ: ಕೋಳಿಹಾಳ ಗ್ರಾಮದಲ್ಲಿ ರಾತ್ರಿವೇಳೆ ಭೂಕಂಪನ ,ಭಯಭೀತರಾದ ಜನ,ಗ್ರಾಮಕ್ಕೆ ಅಧಿಕಾರಿಗಳ ಬೇಟಿ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೋಳಿಹಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಭೂಮಿ ಕಂಪಿಸಿದ್ದು ಗ್ರಾಮದ ಜನರು ಭಯಭೀತರಾಗಿದ್ದಾರೆ. ಮೂರಕ್ಕೂ ಹೆಚ್ಚು ಬಾರಿ ಭೂಮಿಕಂಪನದಿಂದ ಮನೆಗಳು ನಡುಗಿದಂತಾಗಿ ಮನೆಯಲ್ಲಿದ್ದವರು ಭಯ ದಿಂದ ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿ ಇರುವಂತ ಸಾಮಾನುಗಳು ಕೂಡ ಕೆಳಗೆ ಬಿದ್ದಿದ್ದು ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿರುವ ಕುರಿತು ಮಾಹಿತಿ ತಿಳಿದು ಬಂದಿಲ್ಲ. ಘಟನೆಯ ವಿವರ ತಿಳಿಯುತ್ತಿದ್ದಂತೆ ಶನಿವಾರ ಬೆಳಗ್ಗೆ ಕೋಳಿಹಾಳ ಗ್ರಾಮಕ್ಕೆ ತಹಸೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆಯೂ ಇದೇ ರೀತಿ ಭೂಮಿ ಕಂಪಿಸಿರುವ ಅನುಭವ ಆಗಿತ್ತು ಎಂದು ಗ್ರಾಮದ ಕಾಶೀನಾಥ್ ಎನ್ನುವವರು ತಿಳಿಸಿದ್ದಾರೆ.