ಚಿತ್ರದುರ್ಗ: ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆ ಚಿತ್ರದುರ್ಗದಲ್ಲಿ ಪ್ರಣವಾನಂದ ಸ್ವಾಮೀಜಿ ಸುದ್ದಿಗೋಷ್ಟಿ
ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಈಡಿಗ ಸಮಾಜದ ಪ್ರಣವಾನಂದ ಶ್ರೀಗಳು ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ರಾಜ್ಯದಲ್ಲಿ ಸರಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡ್ತಿದೆ, ಈಡಿಗ, ಬಿಲ್ಲವ, ನಾಮಧಾರಿ ಸಮಾಜ ಇದನ್ನು ಸ್ವಾಗತ ಮಾಡುತ್ತದೆ ಎಂದರು. ಅಲ್ಲದೆ ಪರಿಶಿಷ್ಟ ಜಾತಿ, ಪಂಗಡದವರು ನೂರಾರು ವರ್ಷಗಳಿಂದ ಸೌಲಭ್ಯಗಳಿಂದ ವಂಚಿತವಾಗಿವೆ,ಸರಕಾರ ಪ್ರಣಾಳಿಕೆಯಲ್ಲಿ ಹೇಳಿದಂತೆ ಸರ್ವೆ ಪ್ರಾರಂಭಿಸಿದೆ,ನಮ್ಮ ಸಮಾಜದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ಹಾಗೂ ಧೀವರು ನಾಲ್ಕು ಪ್ರಬಲ ಸಮಾಜಗಳಾಗಿವೆ. ಉಡುಪಿ ಹಾಗೂ ಮಂಗಳೂರಲ್ಲಿ ಬಿಲ್ಲವ ಸಮಾಜದ 15ಲಕ್ಷ ಜನಸಂಖ್ಯೆ ಇದೆ, ಧೀವರು ಸಮಾಜದ್ದು ಶಿವಮೊಗ್ಗದಲ್ಲಿ 5 ಲಕ್ಷ ಜನಸಂಖ್ಯೆ ಇದೆ ಎಂದರು