ಮಡಿಕೇರಿ: ನಗರದ ಕೊನೆಯ ಗಣಪತಿ ವಿಸರ್ಜನ ಮೆರವಣಿಗೆ ನಡೆಯಿತು
ಕೊಡಗು ಜಿಲ್ಲೆ ಮಡಿಕೇರಿಯ ಮಂಗಳದೇವಿ ನಗರದ ಆದಿಪರಶಕ್ತಿ ಯುವಕ ಸಂಘದ ವತಿಯಿಂದ ಗಣಪತಿ ವಿಸರ್ಜನೆಯು ಬಹಳ ಅದ್ದೂರಿಯಾಗಿ ನಡೆಯಿತು ಮಡಿಕೇರಿ ಮಂಗಳದೇವಿ ನಗರದಲ್ಲಿ 50 ನೇ ವರ್ಷದ ಆದಿಪರಶಕ್ತಿ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಕಳೆದ 19 ದಿನಗಳ ಕಾಲ ಪ್ರತಿಷ್ಟಾಪಿಸಿ ವಿಶೇಷ ಪೂಜೆಯ ಬಳಿಕ ಬಹಳ ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು. ಮಡಿಕೇರಿಯ ಕೊನೆಯ ಗಣಪತಿ ವಿಸರ್ಜನೆ ಇದಾಗಿದ್ದು ಮಡಿಕೇರಿ ಜನತೆ ಡಿಜೆ ಸೌಂಡ್ ಗೆ ಕುಣಿದು ಕುಪ್ಪಳಿಸಿಸಿದ್ರು. ಗಣಪತಿ ಮೂರ್ತಿಯನ್ನ ಭವ್ಯ ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ತರಲಾಯಿತು ಮಡಿಕೇರಿಯ ಮಂಗಳಾದೇವಿ ನಗರದಿಂದ ಹೊರಟ ಮೇರವಣಿಗೆ ಜನರಲ್ ತಿಮ್ಮಯ ವೃತ್ತ ,ಮಂಗೇರಿರ ಮುತ್ತಣ್ಣ ವೃತ್ತ , ಹಳೆಯ ಖಾಸಗಿ ಬಸ್ಸ ನಿಲ್ದಾಣ