ಆಳಂದ: ಅನುವಾದ ವಸಾಹತುಶಾಹಿ ವಿಚಾರಗಳಿಂದ ಹೊರಬರಲು ಸಹಾಯ ಕಡಗಂಚಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜೆಎನ್ ಯುನ್ ಪ್ರೊ.ಇಂದ್ರಾಣಿ
ಅನುವಾದವು ಮನಸ್ಸನ್ನು ವಿಮೋಚನೆಗೊಳಿಸಲು ಮತ್ತು ವಸಾಹಾತುಶಾಹಿ ವಿಚಾರಗಳಿಂದ ಹೊರಬರಲು ಸಹಾಯ ಮಾಡುತ್ತದೆ, ಎಂದು ನವದೆಹಲಿಯ ಜೆಎನ್‍ಯುನ ಪ್ರೊ.ಇಂದ್ರಾಣಿ ಮುಖರ್ಜಿ ಹೇಳಿದರು. ಸೋಮವಾರ ಮಧ್ಯಾಹ್ನ 2 ಘಂಟೆಗೆ ಆಳಂದ ತಾಲ್ಲೂಕಿನ ಕಡಗಂಚಿ ಹತ್ತಿರದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮೈಸೂರಿನ ಸಿಐಐಎಲ್ ರಾಷ್ಟ್ರೀಯ ಅನುವಾದ ಮಿಷನ್, ಸಹಯೋಗದಲ್ಲಿ ಆಯೋಜಿಸಿದ್ದ ಒಂದು ವಾರದ ಭಾರತೀಯ ಭಾಷೆಗಳಲ್ಲಿ ಭಾಷಾಂತರ ಕುರಿತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.ಕುಲಪತಿ ಪ್ರೊ.ಬಟ್ಟು ಇತರರು ಇದ್ದರು.