ಕೃಷ್ಣರಾಜಪೇಟೆ: ಪಟ್ಟಣದ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯಕ್ಕೆ ಮಂಜುಳಾ ಆಯ್ಕೆ, ಅಭಿನಂದಿನೆ
ಕೆ. ಆರ್. ಪೇಟೆ ಪಟ್ಟಣದ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯಕ್ಕೆ ಮಂಜುಳಾ ಅವರು ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ಮಂಡ್ಯದ ನೂತನ ನಿರ್ದೇಶಕರಾಗಿ ಕೆ.ಆರ್. ಪೇಟೆ ಪಿಎಲ್ಡಿ ಬ್ಯಾಂಕ್ ನಿರ್ದೇಶಕಿ ಮಂಜುಳಾ ಕೃಷ್ಣಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ನಿಗದಿಯಾಗಿತ್ತು. ಜಿಲ್ಲೆಯ ಸಹಕಾರ ಸಂಘಗಳ ಎ ತರಗತಿಯ ಸಾಮಾನ್ಯ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಂಜುಳಾ ಕೃಷ್ಣಗೌಡ ಅವರ ಆಯ್ಕೆಯನ್ನು ಚುನಾವಣಾ ಅಧಿಕಾರಿಗಳು ಘೋಷಿಸಿದರು.