ಹಿರಿಯೂರು: ತಾಲೂಕಿನ ಬಬ್ಬುರು ಶ್ರೀರಂಗನಾಥ ಸ್ವಾಮಿಯ ದೇವಸ್ಥಾನದ ಬಳಿ ಜಾತಿ ಗಣತಿ ಜಾಗೃತಿ ಕಾರ್ಯಕ್ರಮ
ತಾಲೂಕಿನ ಬಬ್ಬುರು ಶ್ರೀರಂಗನಾಥ ಸ್ವಾಮಿಯ ದೇವಸ್ಥಾನದ ಬಳಿ ಜಾತಿ ಗಣತಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿರಿಯೂರು ತಾಲೂಕು ಕಾಡುಗೊಲ್ಲ ಸಮಾಜದ ಅಧ್ಯಕ್ಷರಾದ ಪಿ.ಆರ್. ದಾಸ್ ರವರ ನೇತೃತ್ವದಲ್ಲಿ ತಾಲೂಕಿನ ಬಬ್ಬುರು ಶ್ರೀರಂಗನಾಥ ಸ್ವಾಮಿಯ ದೇವಸ್ಥಾನದ ಬಳಿ ಜಾಗೃತಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮ್ಮ ಕಾಡುಗೊಲ್ಲ ಜಾನಾಂಗಕ್ಕೆ ಜಾತಿಗಣತಿ ಕಾಲಂ ನಲ್ಲಿ ಕಾಡುಗೊಲ್ಲ ಎಂದು ಸೇರಿಸಿ ಕುಲಕಸುಬು ಕುರಿ ಸಾಕಾಣಿಕೆ ಮತ್ತು ಪಶು ಸಂಗೋಪನೆ ಎಂದು ನಮೂದಿಸಿ ಎಂದು ಮನೆಮನೆಗೂ ಭೇಟಿ ನೀಡಿ ಸಮಾಜದ ಬಂಧುಗಳಿಗೆ ಜಾಗೃತಿ ಮೂಡಿಸಲಾಯಿತು