ತಾಳಿಕೋಟಿ: ಪಟ್ಟಣದ ಡೋಣಿನದಿಯಲ್ಲಿ ಕೊಚ್ಚಿ ಹೋದ ಯುವಕನ ಶವ 8 ದಿನಗಳ ನಂತರ ಪತ್ತೆ, ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ
ವಿಜಯಪುರ ಜಿಲ್ಲೆಯ ತಾಳಿಕೋಟಿ ಡೋಣಿಯಲ್ಲಿ ಕೊಚ್ಚಿ ಹೋಗಿದ್ದ ಸಂತೋಷ ಹಡಪದ ಶವ ಪತ್ತೆಯಾಗಿದೆ. ಡೋಣಿನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಹೆಣವಾಗಿ ಪತ್ತೆಯಾಗಿದ್ದಾನೆ.ಮೃತ ದುರ್ದೈವಿಯನ್ನ ಸಂತೋಷ ಹಡಪದ(24) ಎಂದು ಗುರುತಿಸಲಾಗಿದೆ.ಕಳೆದ ವಾರ ಸುರಿದ ಭಾರೀ ಮಳೆಯಿಂದ ತಾಳಿಕೋಟಿ ಬಳಿಯ ಡೋಣಿಯಲ್ಲಿ ಸೆ,24 ರಂದು ಡೋಣಿ ದಾಟಲು ಹೋಗಿದ್ದ ಯುವಕ ಸಂತೋಷ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿಹೋಗಿದ್ದನು, ಇನ್ನೂ ಸಂತೋಷನ ಶೋಧ ಕಾರ್ಯ ಮುಂದುವರೆದಿದ್ದು ಸದ್ಯ ನೀರಿನ ಮಟ್ಟ ಕಡಿಮೆಯಾದ ಹಿನ್ನಲೆಯಲ್ಲಿ ಗುರುವಾರ ಸಾಯಂಕಾಲ 5ಗಂಟೆ ಸುಮಾರಿಗೆ ಅಗ್ನಿಶಾಮಕ ಸಿಬ್ಬಂದಿಗಳು ಸಂತೋಷನ ಶವವನ್ನ ಪತ್ತೆಹಚ್ಚಿ ಹೋರತೆಗೆದಿದ್ದಾರೆ.ಮೃತ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.