ಹರಿಹರ: ಸೆ.18ರಂದು ಮಲೇಬೆನ್ನೂರು ಗಣಪತಿ ವಿಸರ್ಜನೆ, 20 ಸಾವಿರ ಜನ ಸೇರುವ ನಿರೀಕ್ಷೆ; ಮಲೇಬೆನ್ನೂರಲ್ಲಿ ಮಾಜಿ ಜಿ ಪಂ ಸದಸ್ಯ ವಾಗೀಶ್ ಸ್ವಾಮಿ
ಮಲೇಬೆನ್ನೂರಲ್ಲಿ ಸ್ಥಾಪನೆ ಮಾಡಿರುವ 4ನೇ ವರ್ಷದ ಹಿಂದೂ ಮಹಾಗಣಪತಿಯನ್ನು ಸೆ.18ರ ಗುರುವಾರ ವಿಜೃಂಭಣೆಯಿAದ ವಿಸರ್ಜಿಸಲಾಗುವುದು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ತಿಳಿಸಿದರು. ಅವರು ಮಂಗಳವಾರ ಸಂಜೆ 5 ಗಂಟೆಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೇಬೆನ್ನೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ಆ.28 ರಂದು ಮಲೇಬೆನ್ನೂರಿನ ನೀರಾವರಿ ಇಲಾಖೆಯ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿಯನ್ನು ಸೆ.18ರ ಗುರುವಾರ ಪಟ್ಟಣದ ರಾಜಬೀದಿಯಲ್ಲಿ ವಿವಿದ ಕಲಾಮೇಳಗಳ ತಂಡಗಳೊAದಿಗೆ ಮೆರವಣಿಗೆ ಸಾಗಿ ದೊಡ್ಡ ಚಾನಲ್ನಲ್ಲಿ ವಿಸರ್ಜಿಸಲಾಗುವುದು ಎಂದರು.