ಕಮಲಾಪುರ: ಓಕಳಿಯಲ್ಲಿ ಮನೆಗೆ ಬೆಂಕಿ ತಗುಲಿ ಬೆಲೆ ಬಾಳುವ ವಸ್ತು ಸುಟ್ಟು ಕರಕಲು, ಕಂಗಾಲಾದ ಬಡ ಕುಟುಂಬ
ಮನೆಗೆ ಬೆಂಕಿ ತಗುಲಿ ಧವಸಧಾನ್ಯ ಸೇರಿ ಮನೆಯ ವಸ್ತುಗಳು ಸುಟ್ಟು ಬಸ್ಮವಾಗಿರುವ ಘಟನೆ ಕಮಲಾಪುರ ತಾಲೂಕಿನ ಓಕಳಿ ಗ್ರಾಮದಲ್ಲಿ ನಡೆದಿದೆ. ಯಶೋಧಾ ಲೋಹಿತ ಹಳ್ಳಿಖೇಡ್ ಎಂಬುವರಿಗೆ ಸೇರಿದ ಮನೆ ಸುಟ್ಟು ಕರಕಲಾಗಿದೆ. ಟಿವಿ, ಅಲಮಾರಿ, ಟೇಬಲ್, ಅಕ್ಕಿ ಜೋಳ, ಮಕ್ಕಳ ಪುಸ್ತಕಗಳು, ಬಟ್ಟೆ ಸೇರಿದಂತೆ ಇತರೆ ಮನೆಯ ಸಾಮಾನುಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಸುಟ್ಟು ಬಸ್ಮವಾಗಿದೆ. ಮನೆಯವರು ಹೊಲದಲ್ಲಿ ಕೆಲಸದಲ್ಲಿರುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಏಕಾಏಕಿ ಪಟಾಕಿ ಬಾಂಬ್ ಸಿಡಿದ ಶಬ್ದ ಕೇಳಿ ಮನೆಯಲ್ಲಿದ್ದ ಮಕ್ಕಳು ತಕ್ಷಣ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಮಾನವ ಹಾನಿ ಸಂಭವಿಸಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.