ಧಾರವಾಡ ತಾಲೂಕಿನ ತೇಗೂರ ಗ್ರಾಮದ ಭಾರತ ಪ್ಯಾಲೇಸ್ ಹೋಟೆಲ್ ಹತ್ತಿರ ನವೆಂಬರ್ ೨೪ ರಂದು ಅಕ್ರಮವಾಗಿ ೩೫ ಲೀಟರ್ ಸ್ಟೀರಿಟ್ ತುಂಬಿದ ೮೪೪ ಕ್ಯಾನಗಳನ್ನು ವಶಕ್ಕೆ ಪಡೆದುಕೊಂಡು ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿತರ ಪತ್ತೆ ಕಾರ್ಯ ಕೈಗೊಂಡಾಗ ಒಟ್ಟು ೫೧ ಕೆಜಿ ೪೬೦ ಗ್ರಾಂ ಒಣಗಿದ ಮಾದಕ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಧಾರವಾಡ ಗರಗ ಪೊಲೀಸರು ಯಶಸ್ವಿಯಾಗಿದ್ದಾರೆ. ಸದರಿ ಪ್ರಕರಣದಲ್ಲಿನ ಪರಾರಿಯಾಗಿದ್ದ ಇಬ್ಬರು ಆರೋಪಿತ