ಬೆಂಗಳೂರು ದಕ್ಷಿಣ: 8 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಂದ ಪಕ್ಕದ ಮನೆಯ ವ್ಯಕ್ತಿ, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ
ಮಕ್ಕಳು ಆಡುವಾಗ ತನ್ನ ಮಕ್ಕಳಿಗೆ ಹೊಡೆಯುತ್ತಾನೆ ಅಂತ ಪಕ್ಕದ ಮನೆಯ ವ್ಯಕ್ತಿ 8 ವರ್ಷದ ಬಾಲಕನ ಕೊಲೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಂಟು ವರ್ಷದ ರಮಾನಂದ ಬಾಲಕನನ್ನ ಪಕ್ಕದ ಮನೆಯ ಚಂದಸೇಸ್ವರ ಮತ್ತೂರು ಎಂಬಾತ ಕೊಲೆ ಮಾಡಿದ್ದಾನೆ. ಬಾಲಕ ರಮಾನಂದ ಕುಟುಂಬ ಮತ್ತು ಮತ್ತೂರು ಕುಟುಂಬ ಮಧ್ಯೆ ಗಲಾಟೆ ಆಗ್ತಿತ್ತು. ಇದಕ್ಕೆ ದ್ವೇಷದಿಂದ ಮತ್ತೂತು ಬಾಲಕನ ಕಿಡ್ನಾಪ್ ಮಾಡಿದ್ದ ಆರೋಪಿ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹ ಚೀಲದಲ್ಲಿ ಕಟ್ಟಿ ರಾಯಸಂದ್ರ ಕೆರೆ ಬಳಿ ಎಸೆದಿದ್ನಂತೆ.. ಈ ಸಂಬಂಧ ಬಾಲಕನ ಪೋಷಕರು ಠಾಣೆಗೆ ಬಾಲಕನ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ರು. ತನಿಖೆ ನಡೆಸಿದಾಗ ಪಕ್ಕದ ಮನೆಯವನಿಂದಲೇ ಕೃತ್ಯ ಎಸಗಿರೋದು ಬೆಳಕಿಗೆ ಬಂದಿದೆ.