ಬೆಂಗಳೂರು ದಕ್ಷಿಣ: ದೆಹಲಿ ಕಾರ್ ಬ್ಲಾಸ್ಟ್; ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ಕೈವಾಡ ಶಂಕೆ: ನಗರದಲ್ಲಿ ಆರ್.ಅಶೋಕ್
ಬೆಂಗಳೂರಿನ ಪದ್ಮನಾಭನಗರದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಅವರು ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ದೆಹಲಿ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ದೆಹಲಿ ಸ್ಪೋಟ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಅಮಿತ್ ಷಾ ಅವರು ಸ್ಥಳವೀಕ್ಷಣೆ ಮಾಡಿದ್ದಾರೆ. ಇದರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದನೆ ಸಂಘಟನೆಗಳ ಕೈವಾಡ ಶಂಕೆ ಇದೆ. ಕರ್ನಾಟಕದಲ್ಲೂ ಕೂಡಾ ಜೈಲುಗಳಲ್ಲಿರುವ ಭಯೋತ್ಪಾದಕರು ಎಲೆಕ್ಟ್ರಾನಿಕ್ ವ್ಯವಸ್ಥೆ ಬಳಸ್ತಿದ್ದಾರೆ. ದೆಹಲಿ ಸ್ಫೋಟದ ರೂವಾರಿಗಳನ್ನು ಪರಪ್ಪನ ಅಗ್ರಹಾರ ಜೈಲಲ್ಲಿರುವ ಉಗ್ರನೂ ಸಂಪರ್ಕ ಮಾಡಿದ್ನಾ ಅಂತ ತನಿಖೆ ಆಗಬೇಕು ಎಂದರು.