ಮನೆಯಲ್ಲಿ ಮಕ್ಕಳಿಗೆ ಪ್ರೀತಿ ಸಿಕ್ಕರೆ ಶಾಲೆಯಲ್ಲಿ ಶಿಕ್ಷಣ ಮತ್ತು ಪ್ರಗತಿ ಸಿಗುತ್ತದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಬ್ದುಲ್ ಖಾದರ್ ಹೇಳಿದರು. ಕುಂದಗೋಳ ಪಟ್ಟಣದಲ್ಲಿ ಭಾನುವಾರ ಮದ್ಯಾಹ್ನ 3 ಗಂಟೆಗೆ ಜಗದ್ಗುರು ಶ್ರೀ ಶಿವಾನಂದ ವಿದ್ಯಾಪೀಠ ಹೈಸ್ಕೂಲ್ ಮತ್ತು ಕಾಲೇಜನಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಭವಿಷ್ಯದ ಬಗ್ಗೆ ಅಪಾರ ಪ್ರೀತಿಯಿದೆ. ಮಕ್ಕಳ ಶಿಕ್ಷಣದ ಕಡೆ ಒಲವು ಕೊಡಬೇಕು ಎಂದು ತಿಳಿಸಿದರು.