ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣದ ಮುಂಭಾಗ ಸಂತ್ರಸ್ತರಿಂದ ಪ್ರತಿಭಟನೆ
ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಜಮೀನ ನೀಡಿದ ಸಂತ್ರಸ್ತರಿಗೆ ನಿವೇಶನ ಹಂಚದೇ ವಿಳಂಬ ನೀತಿಯನ್ನು ಅನಿಸರಿಸುತ್ತಿರುವುದನ್ನ ವಿರೋಧಿಸಿ ಸೋಗಾನೆ ವಿಮಾನ ನಿಲ್ದಾಣದ ಮುಂಭಾಗ ಗುರುವಾರ ಸೋಗಾನೆ ಭೂಮಿ ಹಕ್ಕು ರೈತ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಗುತ್ತಿದ್ದು, ಆದಷ್ಟು ಬೇಗ ರಾಜ್ಯ ಸರ್ಕಾರ ಸಂತ್ರಸ್ತರಿಗೆ ನಿವೇಶನ ಹಂಚುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.