ಶ್ರೀರಂಗಪಟ್ಟಣ: ಪಟ್ಟಣದ ವರುಣಾ ನಾಲೆಯಲ್ಲಿ ಅಪರಿಚಿತ ಶವ ಪತ್ತೆ
ಶ್ರೀರಂಗಪಟ್ಟಣದ ವರುಣಾ ನಾಲೆಯಲ್ಲಿ ಅಪರಿಚಿತ ಶವ ಪತ್ತೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಠಾಣಾ ವ್ಯಾಪ್ತಿಯ ಬೊಂತಗಳ್ಳಿ ಗ್ರಾಮದ ವರುಣ ನಾಲೆಯಲ್ಲಿ ಸುಮಾರು 40-45 ವರ್ಷ ವಯಸ್ಸಿನ, 5.6 ಅಡಿ ಎತ್ತರದ, ದುಂಡು ಮುಖದ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದೆ. ಮೃತದೇಹದ ಬಲ ತೋಳಿನಲ್ಲಿ 'B' ಮತ್ತು ಎಡ ತೋಳಿನಲ್ಲಿ 'M' ಅಕ್ಷರದ ಟ್ಯಾಟೂ, ಗಡ್ಡ-ಮೀಸೆ, ಬಲಗೈಯಲ್ಲಿ ಕೆಂಪು ದಾರ ಇರುವುದು ಪತ್ತೆಯಾಗಿದೆ. ವಾರಸುದಾರರು ಪತ್ತೆಯಾದಲ್ಲಿ ಅರಕೆರೆ ಠಾಣೆಯನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ. ಈ ಸಂಬಂಧ ಅರಕೆರೆ ಪೋಲಿಸ್ ಠಾಣೆಯಲ್ಲಿ ಭಾನುವಾರ ಸಂಜೆ 6 ಗಂಟೆಯಲ್ಲಿ ಪ್ರಕರಣ ದಾಖಲಾಗಿದೆ