ರಾಯಚೂರು: ನಗರದಲ್ಲಿ ಮನೆಯಿಂದ ಹೊರಹೋದ ವ್ಯಕ್ತಿ ನಾಪತ್ತೆ; ವೆಸ್ಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯ ಅಸ್ಕಿಹಾಳ ನಿವಾಸಿ ಆಂಜನೇಯ (62) ಅವರು ಸೆಪ್ಟೆಂಬರ್ 14ರ ಮಧ್ಯಾಹ್ನ 12.30ಕ್ಕೆ ಮನೆಯಲ್ಲಿ ಊಟ ಮಾಡಿ ಹೊರಗೆ ಹೋಗಿದ್ದು ಮರಳಿ ಮನೆಗೆ ಬಾರದೆ ಕಾಣೆಯಾಗಿದ ಕುರಿತು ಪ್ರಕರಣ ದಾಖಲಾಗಿದೆ. ಕರೆ ಮಾಡಿ ವಿಚಾರಿಸಿದಾಗ ಅವರು ‘ಬರುತ್ತೇನೆ ಬಿಡು’ ಎಂದು ಸಿಟ್ಟಾಗಿದ್ದಾರೆ. ನಂತರ ಸಂಜೆ 4 ಗಂಟೆಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ಡ್ ಆಪ್ ಬಂದಿದೆ. ಕಾಣೆಯಾದ ತಮ್ಮ ತಂದೆಯ ಬಗ್ಗೆ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದಾಗ ಪತ್ತೆಯಾಗಿರುವುದಿಲ್ಲ ಎಂದು ಕಾಣೆಯಾದ ಆಂಜನೇಯ ಅವರ ಪುತ್ರ ರಮೇಶ ದೂರು ದಾಖಲಿಸಿದ್ದಾರೆ. ಕಾಣೆಯಾದ ಆಂಜನೇಯ ಅವರು 5.6 ಎತ್ತರ, ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ, ಉದ್ದನೆಯ ಮುಖ, ತಲೆಯಲ್ಲಿ ಕಪ್ಪು ಕೂದಲು ಹೊಂದಿದ್ದು, ಬಿಳಿ ಪಂ