ಹಳಿಯಾಳ: ಹಲಾಲ್ ಮುಕ್ತ ದೀಪಾವಳಿ ಆಚರಿಸಲು ಪಟ್ಟಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ವಿವಿಧ ಅಂಗಡಿಗಳಿಗೆ ತೆರಳಿ ಮನವಿ
ಹಳಿಯಾಳ : ಪಟ್ಟಣದ ಸೂಪರ್ ಮಾರ್ಕೆಟ್, ಹೋಟೆಲ್ ಕಿರಾಣಿ ಅಂಗಡಿಗಳಿಗೆ 'ಹಲಾಲ್ ಪ್ರಮಾಣಿತ' ಉತ್ಪನ್ನಗಳನ್ನು ವ್ಯಾಪಾರ ಮಾಡದಂತೆ ಹಾಗೂ ಹಲಾಲ್ ಮುಕ್ತ ದೀಪಾವಳಿ ಆಚರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಶನಿವಾರ ಸಂಜೆ 4:00 ಗಂಟೆ ಸುಮಾರಿಗೆ ಮನವಿ ಲಯನ್ನು ನೀಡಲಾಯಿತು. ಜಾತ್ಯಾತೀತ ರಾಷ್ಟ್ರದಲ್ಲಿ ಧಾರ್ಮಿಕ ಆಧಾರಿತ “ಹಲಾಲ್ ಪ್ರಮಾಣಪತ್ರ" ವ್ಯವಸ್ಥೆ ತಕ್ಷಣ ನಿಲ್ಲಿಸಬೇಕು; ಏಕೆಂದರೆ ಇದರಿಂದ ಬಂದ ಹಣವನ್ನು ಉಗ್ರಗಾಮಿಗಳಿಗೆ ಕಾನೂನು ಸಹಾಯ ನೀಡಲು ಬಳಸಲಾಗುತ್ತಿದೆ. ಭಾರತೀಯ ಆರ್ಥಿಕತೆಯನ್ನು ಉಳಿಸಬೇಕಾದರೆ "ಹಲಾಲ್ ಶಕ್ತಿಗೆ ವಿರೋಧಿಸಬೇಕು ಎಂದು ಮನವಿ ಮಾಡಲಾಯಿತು.