ಕಲಬುರಗಿ: ಸೆ17 ರಂದು ಕಲ್ಯಾಣ ಕರ್ನಾಟಕ ಉತ್ಸವ ಹಿನ್ನಲೆ: ನಗರದಲ್ಲಿ ವಿದ್ಯುತ್ ದ್ವೀಪಾಲಾಂಕರಾಗಳಿಂದ ಮದವಣಗಿತ್ತಿಯಂತೆ ಶೃಂಗಾರಗೊಂಡ ಕಲಬುರಗಿ
ಕಲಬುರಗಿ : ನಾಳೆ 78 ನೇ ಕಲ್ಯಾಣ ಕರ್ನಾಟಕ ಉತ್ಸವ ದಿನದ ಅಂಗವಾಗಿ ಕಲಬುರಗಿ ನಗರವನ್ನ ವಿದ್ಯುತ್ ದ್ವೀಪಾಲಾಂಕರಾದಿಂದ ಮದುವಣಗಿತ್ತಿಯಂತೆ ಶೃಂಗಾರ ಮಾಡಲಾಗಿದೆ.. ಸೆ16 ರಂದು ಸಂಜೆ 7 ಗಂಟೆಗೆ ದೃಶ್ಯಗಳು ಕಂಡು ಬಂದಿದೆ.. ನಗರದ ಮಿನಿವಿಧಾನಸೌಧ ಕಟ್ಟಡ, ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜೆಸ್ಕಾಂ ಕಚೇರಿ, ಕೇಂದ್ರ ಬಸ್ ನಿಲ್ದಾಣ, ಐವಾನ್ ಏ ಶಾಹಿ ವಸತಿ ಗೃಹ ಸೇರಿದಂತೆ ಬಹುತೇಕ ಎಲ್ಲಾ ಕಡೆ ಕಲ್ಯಾಣ ಕರ್ನಾಟಕ ಉತ್ಸವ ದಿನದ ಅಂಗವಾಗಿ ವಿದ್ಯುತ್ ದ್ವೀಪಾಲಂಕರಾದಿಂದ ಮದುವಣಗಿತ್ತಿಯಂತೆ ಶೃಂಗಾರ ಮಾಡಲಾಗಿದ್ದು, ಸಾರ್ವಜನಿಕರ ಆಕರ್ಷಣ ಕೇಂದ್ರ ಬಿಂದುವಾಗಿದೆ.