ಮಂಗಳವಾರ ಬೆಳಿಗ್ಗೆ 12 ಗಂಟೆಗೆ ರಾಯಚೂರು ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಐತಿಹಾಸಿಕ ಕೋಟೆ ಕಾಮಗಾರಿಯನ್ನ ರಾಜ್ಯ ಪುರಾತತ್ವ ಇಲಾಖೆ ಆಯುಕ್ತರಾದ ದೇವರಾಜ್ ಅವರು ವೀಕ್ಷಣೆ ಮಾಡಿದರು. ಈ ವೇಳೆ ಸರ್ಕಾರದಿಂದ ಬಂದ ಅನುದಾನ ಸರಿಯಾಗಿ ಬಳಸಬೇಕು, ಉತ್ತಮ ಗುಣಮಟ್ಟದ ಕೆಲಸ ಮಾಡಬೇಕು. ಅಲ್ಲದೆ ಗುತ್ತಿಗೆದಾರರು ಕಾಮಗಾರಿ ಬಗ್ಗೆ ಗಮನಹರಿಸಬೇಕು. ಒಂದುವೇಳೆ ಗುಣಮಟ್ಟ ಇಲ್ಲದೆ ಹೋದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.