ಶಿರಹಟ್ಟಿ: ತಾಲೂಕಿನ ರಾಮಗೇರಿ ಮತ್ತು ಗೋನಾಳ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್,
ಹೌದು, ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಬರುವ ರಾಮಗೇರಿ ಮತ್ತು ಗೋನಾಳ ತಪಾಸಣಾ ಕೇಂದ್ರಕ್ಕೆ ಶನಿವಾರ ಮಧ್ಯಾನ್ಹ ೦೧ ಗಂಟೆಗೆ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಅವರು ಭೇಟಿ ನೀಡಿ ತಪಾಸಣಾ ಕೇಂದ್ರದಲ್ಲಿ ನಡೆಯುತ್ತಿರುವ ಕಾರ್ಯವೈಖರಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು. ನಂತರ ಮಾತನಾಡಿದ ಅವರು, ಈ ಬಾರಿ ನಡೆಯುತ್ತಿರುವ ಲೋಕಸಭಾ ಚುನಾವಣಾ ಕಾರ್ಯದಲ್ಲಿ ಎಲ್ಲ ಸಿಬ್ಬಂದಿಗಳು ಪ್ರಾಮಾಣಿಕತೆಯಿಂದ ಎಲ್ಲ ತಪಾಸಣಾ ಕೇಂದ್ರದಡಿ ಹಾದು ಹೋಗುವ ಎಲ್ಲ ವಾಹನಗಳನ್ನು ಚಾಚೂ ತಪ್ಪದೇ ಪ್ರಾಮಾಣಿಕತೆಯಿಂದ ತಪಾಸಣೆ ಮಾಡಿ ಯಾವುದೇ ರೀತಿಯ ಲೋಪದೋಷಗಳು ನಡೆಯದಂತೆ ಹಾಗೂ ಅನಧೀಕೃತ ಹಣ ಹಾಗೂ ಮದ್ಯ ಸಾಗಾಣಿಕೆಯಾಗದಂತೆ ತಪಾಸಣೆ ಮಾಡಿ ಎಂದು ತಪಾಸಣಾ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.