ಹುಣಸಗಿ: ಹೆಬ್ಬಾಳ ಕೆ ಗ್ರಾಮದ ಬಳಿ ಭಾರಿ ಮಳೆಗೆ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಕಾರು, ಅದೃಷ್ಟವಶಾತ್ ಒಳಗಡೆ ಇದ್ದವರು ಪಾರು
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಲವು ಕಡೆಗಳಲ್ಲಿ ಭಾರಿ ಪ್ರಮಾಣದ ಅವಘಡಗಳು ಸಂಭವಿಸುತ್ತಿವೆ. ಹೆಬ್ಬಾಳ ಕೆ.ಗ್ರಾಮದ ಬಳಿಯಲ್ಲಿನ ಹಳ್ಳ ಬಾರಿ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದ್ದು ಚಿಕ್ಕ ನದಿಯಂತೆ ಭಾಸವಾಗುತ್ತಿದೆ. ಹಳ್ಳದ ನೀರು ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದುದರಿಂದ ರಸ್ತೆ ಸಂಚಾರವು ಬಂದ್ ಆಗಿದೆ. ಶುಕ್ರವಾರ ರಾತ್ರಿ ಕಾರು ಒಂದು ರಸ್ತೆ ದಾಟಲು ಹೋದ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಗಿಡಗಳ ಮಧ್ಯೆ ಸಿಲುಕಿಕೊಂಡು ನಿಂತಿದೆ. ಅದೃಷ್ಟವಶಾತ್ ಕಾರಿನಲ್ಲಿ ಇದ್ದವರಿಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಸ್ಥಳೀಯವಾಗಿ ಇದ್ದವರು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಾರು ಯಾರಿಗೆ ಸೇರಿದ್ದು ಎನ್ನುವುದು ತಿಳಿದಿಲ್ಲ.