ಧಾರವಾಡ: ನವಲಗುಂದ ಬಸ್ ನಿಲ್ದಾಣದಲ್ಲಿ ಆಭರಣ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ನವಲಗುಂದ ಠಾಣೆಯ ಪೊಲೀಸರು ಯಶಸ್ವಿ
ನವಲಗುಂದ ಬಸ್ ನಿಲ್ದಾಣದಲ್ಲಿ ಆಭರಣ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ನವಲಗುಂದ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ದೂರುದಾರ ರೋಣ ತಾಲೂಕಿನ ಸುಮಿತ್ರಾ ಸಿದ್ದಪ್ಪ ಸಜ್ಜನರ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ನವಲಗುಂದ ಠಾಣೆಯ ಪೊಲೀಸರು ಇಬ್ಬರು ಜನ ಆರೋಪಿತರನ್ನು ಬಂಧಿಸಿದ್ದಾರೆ.