ಬೆಂಗಳೂರು ಉತ್ತರ: ಎಲ್ಲಾ ರಾಜ್ಯಗಳಲ್ಲಿ ತನಿಖಾ ಸಂಸ್ಥೆಗಳು,ಪೊಲೀಸ್ ಹೈ ಅಲರ್ಟ್, ಕೇಂದ್ರ ಗೃಹ ಇಲಾಖೆಯಿಂದ ಸೂಚನೆ
ಇಂದು ಅಂದರೆ ಮೇ 7ರಂದು ಪಾಕ್ ನ ಉಗ್ರರ ಒಂಭತ್ತು ನೆಲಗಳ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿ ಹಲವು ಉಗ್ರರನ್ನ ಹೊಡೆದುರುಳಿಸಿದೆ. ಈ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಪ್ರಧಾನಿ ನೇತೃತ್ವದಲ್ಲಿ ಸಭೆಗಳು ನಡೆದಿವೆ ಎಂದು ಮಾಹಿತಿ ಹೊರ ಬಿದ್ದಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಹೈ ಅಲರ್ಟ್ ಇರಲು ಕೇಂದ್ರ ಗೃಹ ಸಚಿವಾಲಯದಿಂದ ಎಲ್ಲಾ ರಾಜ್ಯಗಳಿಗೂ ಸೂಚನೆ ಹೊರಡಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳು ರಾಜ್ಯದಲ್ಲಿ ಅಲರ್ಟ್ ಆಗಿವೆ. ನಗರಗಳ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ನಿಗಾವಹಿಸಲಾಗಿದೆ. ರೈಲ್ವೇ ನಿಲ್ದಾಣ, ಮಾಲ್, ಹೋಟೆಲ್ ಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.