ಕಾರಟಗಿ: ಪೀಸ್ ಕಟ್ಟಲಾಗದೆ ತಾಯಿಯ, ತಾಳಿ ಬಿಚ್ಚಿ ಕೊಟ್ಟ ಪ್ರಕರಣ ವಿದ್ಯಾರ್ಥಿನಿಯ ಸಂಪೂರ್ಣ ವೆಚ್ಚದ ಜವಾಬ್ದಾರಿ ಹೊತ್ತ ಸಚಿವ ತಂಗಡಗಿ....!
ಗಂಗಾವತಿ ನಗರದ ನರ್ಸಿಂಗ್ ಕಾಲೇಜಿನ ಫೀಸ್ ಕಟ್ಟಲಾಗದೆ ವಿದ್ಯಾರ್ಥಿನಿ ದಾಖಲೆಗಳನ್ನು ಪಡೆಯುವ ವೇಳೆ ತಾಯಿಯ ತಾಳಿ ಬಿಚ್ಚಿಕೊಟ್ಟು ರಾಜ್ಯದಾದ್ಯಂತ ಸುದ್ದಿಯಾಗಿದ್ದ ಪ್ರಕರಣದಲ್ಲಿ, ಸದ್ಯ ವಿದ್ಯಾರ್ಥಿನಿ ಕಾವೇರಿಯ ಸಂಪೂರ್ಣ ಕಾಲೇಜು ವೆಚ್ಚದ ಜವಾಬ್ದಾರಿಯನ್ನ, ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಹಿಸಿಕೊಂಡಿದ್ದಾರೆ. ರವಿವಾರ ಸಾಯಂಕಾಲ ಶಿವರಾಜ್ ತಂಗಡಿಯನ್ನ ಕಾವೇರಿಯ ಕುಟುಂಬಸ್ಥರು ಭೇಟಿ ಮಾಡಿ ವಿಷಯವನ್ನು ತಿಳಿಸಿದ ವೇಳೆ ಕಾಲೇಜು ಚೇರ್ಮನ್ಗೆ ಫೋನ್ ಮಾಡಿ ಸಂಪೂರ್ಣ ವೆಚ್ಚವನ್ನು ತಾವೇ ಬರಿಸುವುದಾಗಿ ತಿಳಿಸಿದ್ದಾರೆ...