ಕನಕಪುರ: ಇಂದಿರನಗರದಲ್ಲಿ ಅನ್ಯ ಧರ್ಮಿಯ ಯುವಕ ಯುವತಿ ಮೇಲೆ ಹಲ್ಲೆ ಮಾಡಿದ್ದ 4 ಮಂದಿ ಬಂಧನ
ಇಂದಿರಾನಗರದಲ್ಲಿ ವಾಸವಿರುವ ಅನ್ಯ ಧರ್ಮಿಯರಾದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇದನ್ನು ಸಹಿಸದೆ ಕೆಲವರು 20 ರಂದು ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕವಾಗಿ ಹಲ್ಲೆ ಮಾಡಿ, ಇಬ್ಬರಿಗೂ ತಲೆ ಬೋಳಿಸಿ ದುರ್ವರ್ತನೆ ತೋರಿದ್ದರು. ಈ ಸಂಬಂಧ ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಕನಕಪುರದ ಶೇಖ್ ಕಬೀರ್, ಸುಹೇಲ್,ಸೈಯದ ನಯಾಜ್, ನವಾಜ್ ಖಾನ್ ನಾಲ್ಕು ಮಂದಿಯನ್ನ ಭಾನುವಾರ ಬಂಧಿಸಿದ್ದಾರೆ.