ಶಿವಮೊಗ್ಗ: ಸಿಎಂ ಸಿದ್ದರಾಮಯ್ಯರವರಿಗೆ ಯಾಕೇ ಇಂತ ದುರ್ಬುದ್ದಿ ಬಂದಿದೆ ಗೊತ್ತಿಲ್ಲ: ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸಿಎಂ ಸಿದ್ದರಾಮಯ್ಯನವರಿಗೆ ಯಾಕೇ ಇಂತ ದುರ್ಬುದ್ದಿ ಬಂದಿದೆ ಗೊತ್ತಿಲ್ಲ ಎಂದು ಶಿವಮೊಗ್ಗ ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ವಾಗ್ದಾಳಿ ನಡೆಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾಕೆ ಇಂಥ ವಿಕೃತಿ ಮನಸ್ಸಿನಿಂದ ರಾಜ್ಯವನ್ನ ಒಡೆಯುವ ಕೆಲಸ ಮಾಡ್ತಿದ್ದಾರೋ ಎಂದು ಸಿದ್ದರಾಮಯ್ಯ ವಿರುದ್ಧ ರಾಜ್ಯದ ಜನತೆ ಮಾತನಾಡುತ್ತಿದ್ದಾರೆ.ಒಂದಲ್ಲ,ಎರಡಲ್ಲ ಧರ್ಮಸ್ಥಳ ವಿಚಾರದಲ್ಲಿ ಭಕ್ತರ ಭಾವನೆಗೆ ಕೊಡಲಿ ಪೆಟ್ಟು ಕೊಡುವ ಅದೃಷ್ಟ ಕೆಲಸ ಕಾಂಗ್ರೆಸ್ ಕೈ ಹಾಕಿತ್ತು ಎಂದರು.