ಭಾಲ್ಕಿ: ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗಿದ ಬಾಲ ಯೇಸುವಿನ ಜಾತ್ರಾಮಹೋತ್ಸವ
Bhalki, Bidar | Nov 7, 2025 ಇಂದು 7/11/2025 ರಂದು ಸರಿಯಾಗಿ 3 ಗಂಟೆಗೆ ಬಾಲ ಯೇಸುವಿನ ಭಾಲ್ಕಿ ಜಾತ್ರೋತ್ಸವವವನ್ನು ಭವ್ಯ ಮೆರವಣೆಯ ಮೂಲಕ ಗುಲ್ಬರ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ಪೂಜ್ಯ ರಾಬರ್ಟ್ ಮೈಕಲ್ ಮಿರಾoದ ರವರ ಆಶೀರ್ವಾದದೊಂದಿಗೆ ಚಾಲನೆಯನ್ನು ಕೊಟ್ಟರು. ಈ ಭವ್ಯ ಮೆರವಣೆಗೆ ಪುರಸಭೆ ಭಾಲ್ಕಿಯ ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡು ಬಾಲ ಯೇಸುವಿನ ಪುಣ್ಯ ಕ್ಷೇತ್ರಕ್ಕೆ ಬಂದು ಸೇರಿತು. ಈ ಮೆರವಣಿಗೆಯಲ್ಲಿ ಧರ್ಮಾಧ್ಯಕ್ಷರ ಜೊತೆ, ಶ್ರೇಷ್ಠ ಗುರುಗಳು, ವಿವಿಧ ಕೇಂದ್ರಗಳಿಂದ ಗುರುಗಳು ಸಿಸ್ಟರ್ಸ್, ಮತ್ತು ಭಕ್ತ ವಿಶ್ವಾಸಿಗಳು ಈ ಧಾರ್ಮಿಕ ಮೆರವಣಿಗೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು.