ಕಂಪ್ಲಿ: ಪಾಂಡವರಿಗೆ ಎಮ್ಮೆಗಳ ಗೌರವ, ಮುದ್ದಾಪುರದಲ್ಲಿ ವಿಶಿಷ್ಟ ದೀಪಾವಳಿ ಆಚರಣೆ
Kampli, Ballari | Oct 22, 2025 ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ದೀಪಾವಳಿ ಪಾಡ್ಯದಂದು ಪಾಂಡವರಿಗೆ ಎಮ್ಮೆಗಳ ಮೂಲಕ ಚೆಲ್ಲು ಹೊಡೆಸುವ ವಿಶಿಷ್ಟ ಸಂಪ್ರದಾಯ ನಡೆಯುತ್ತಿದೆ. ಹಾಲು ನೀಡಿ ಬದುಕಿಗೆ ಆಸರೆ ನೀಡಿದ ಎಮ್ಮೆಗಳನ್ನು ಅಲಂಕರಿಸಿ, ಪೂಜಿಸಿ, ಮೆರವಣಿಗೆ ನಡೆಸಲಾಗುತ್ತದೆ. ನಂತರ ಪಾಂಡವರ ಸ್ಮರಣಾರ್ಥವಾಗಿ ಸೆಗಣಿಯಿಂದ ಪಾಂಡವರ ರೂಪ ತಯಾರಿಸಿ, ಎಮ್ಮೆಗಳ ಮೂಲಕ ಚೆಲ್ಲು ಹೊಡೆಸಲಾಗುತ್ತದೆ. ಈ ಸಂಪ್ರದಾಯ ಗೌಳಿಗರ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು, ಹಾಲು-ಹೈನು ಸಮೃದ್ಧಿಯಾಗಲಿ ಎಂಬ ಸಂಕಲ್ಪದೊಂದಿಗೆ ಆಚರಿಸಲಾಗುತ್ತದೆ ಎಂದು ಅ.22,ಮಂಗಳವಾರ ಸಂಜೆ 5ಗಂಟೆಗೆ ಜನರು ಅಭಿಪ್ರಾಯ ಪಟ್ಟಿದ್ದಾರೆ