ಯಾದಗಿರಿ: ಭಾರತೀಯ ಮಾನವ ಹಕ್ಕುಗಳ ಪರಿಷತ್ ರಾಜ್ಯಾಧ್ಯಕ್ಷರಾಗಿ ತಾಜೊದ್ದಿನ್ ಹುಸೇನ್ ನೇಮಕ,ನಗರದಲ್ಲಿ ಸನ್ಮಾನ
Yadgir, Yadgir | Sep 29, 2025 ಭಾರತೀಯ ಮಾನವ ಹಕ್ಕುಗಳ ಪರಿಷತ್ ರಾಜ್ಯ ಅಧ್ಯಕ್ಷರಾಗಿ ಯಾದಗಿರಿಯ ಯುವ ಹೋರಾಟಗಾರ ತಾಜುದ್ದೀನ್ ಹುಸೇನ್ ಅವರನ್ನು ನೇಮಕಗೊಳಿಸಲಾಗಿದ್ದು ಇದರ ಅಂಗವಾಗಿ ಭಾನುವಾರ ಸಂಜೆ ಯಾದಗಿರಿ ನಗರದಲ್ಲಿ ಅನೇಕ ಮುಖಂಡರು ಸನ್ಮಾನಿಸಿದ ಗೌರವಿಸಿದ್ದಾರೆ. ತಾಜುದ್ದೀನ್ ಹುಸೇನ್ ಕಳೆದ ಅನೇಕ ವರ್ಷಗಳಿಂದ ಶೋಷಿತರ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದು, ಈಗ ಅವರನ್ನು ಮಾನವ ಹಕ್ಕುಗಳ ಪರಿಷತ್ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿರುವುದು ತುಂಬಾ ಸಂತೋಷ ತಂದಿದೆ ಎಂದು ನಗರಸಭೆ ಮಾಜಿ ಸದಸ್ಯ ಅಬ್ದುಲ್ ಕರೀಂ ನಾಲ್ವರಿ ಹಾಗೂ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.