ಭಾಲ್ಕಿ: ಬೈಕ್'ಗೆ ಇರ್ಟಿಗಾ ವಾಹನ ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರವಲಯದ ದಾದರ ಹತ್ತಿರದ ಸಿದ್ಧಾರ್ಥ್ ನಗರ ಕ್ರಾಸ್ ಬಳಿ ಜರುಗಿದೆ. ತಾಲೂಕಿನ ಕೋಟಗ್ಯಾಳ್ ಗ್ರಾಮದ ನಿವಾಸಿ ಲಹುಕುಮಾರ ವೆಂಕಟರಾವ ಬಿರಾದಾರ (35) ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ