ಬೆಂಗಳೂರು ಉತ್ತರ: ವೀರಶೈವ ಲಿಂಗಾಯತ ನಾಯಕತ್ವ ಪಡೆದ ಸಮಾಜ - ನಗರದಲ್ಲಿ ಬಸವರಾಜ ಬೊಮ್ಮಾಯಿ
ಯಾವ ನಾಯಕ ತನ್ನ ಬುದ್ದಿ ಶಕ್ತಿಯನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತಾನೊ ಅವನು ಯಶಸ್ವಿಯಾಗುತ್ತಾನೆ.ಯಾವ ವ್ಯಕ್ತಿ ತನ್ನ ಬುದ್ದಿ ಶಕ್ತಿಯನ್ನು ಇನ್ನೊಬ್ಬರ ಕೈಗೆ ಕೊಡುತ್ತಾನೊ ಅವನು ವಿಫಲ ಆಗುತ್ತಾನೆ. ವೀರಶೈವ ಲಿಂಗಾಯತ ನಾಯಕತ್ವ ಪಡೆದ ಸಮಾಜ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ಸೆಪ್ಟೆಂಬರ್ 14ರಂದು ಮಧ್ಯಾಹ್ನ 12 ಗಂಟೆಗೆ ಯಲಹಂಕ ಸಮೀಪದ ಕೆವಿಎಲ್ ಎಂಪ್ಲಾಯಿಸ್ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ 5ನೇ ವಾರ್ಷಿಕ ಸಾಮನ್ಯ ಸಭೆ, ಕೆವಿಎಲ್ ಅಕಾಡೆಮಿ ಉದ್ಘಾಟನೆ, ಕೆವಿಎಲ್ ಮ್ಯಾಟ್ರಿಮೊನಿ ಅನಾವರಣ ಹಾಗೂ ಕೆವಿಎಲ್ ಕ್ರೆಡಿಟ್ ಆನ್ ಲೈನ್ ಸದಸ್ಯತ್ವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.