ಬೆಳಗಾವಿ: ಪಿಡಿಒಗಳ ಮೇಲಿನ ಹಲ್ಲೆ ಖಂಡಿಸಿ ನಗರದಲ್ಲಿ ಪಿಡಿಓಗಳಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಮೇಲೆ ಇತ್ತೀಚಿಗೆ ನಡೆದ ಹಲ್ಲೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು & ಸಿಬ್ಬಂದಿಗಳ ರಕ್ಷಣಾ ಕಾಯ್ದೆ ಜಾರಿ ತರಬೇಕು ಎಂದು ಶುಕ್ರವಾರ 12 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಪಿಡಿಒ & ಕಾರ್ಯದರ್ಶಿಗಳ ಮೇಲೆ ಆಗುತ್ತಿರುವ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದರು ಪಿಡಿಒ ಜಯಗೌಡ ಪಾಟೀಲರು ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯದಲ್ಲಿ ಇರುವಾಗ ಪರಮೇಶಿ ಲಕ್ಷ್ಮಣ ಚಿತ್ರಕೋಟಿ, ಹಣಮಂತ ಲಕ್ಷ್ಮಣ ಸಿದನ್ನವರ, ಸಿದ್ರಪ್ಪ ಹಣಮಂತ ಚಿಕ್ಕನ್ನವರ ಹಾಗೂ ಯಲ್ಲಪ್ಪ ಮಾರುತಿ ಕಮ್ಮನಕೋಳ ಎಂಬುವರು ಕಾನೂನು ಬಾಹಿರವಾಗಿ ಇ ಸ್ವತ್ತು ನೀಡಲು ಪಿಡಿಒ ರವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದರು.