ಚಿತ್ರದುರ್ಗ: ಚನ್ನಬಸಯ್ಯನಹಟ್ಟಿ ಬಳಿ ಎರಡು ಕಾರುಗಳ ನಡುವೆ ಬೀಕರ ಅಪಘಾತ, ಎಂಟು ಮಂದಿಗೆ ಗಾಯ
ಚನ್ನಬಸಯ್ಯನಹಟ್ಟಿ ಬಳಿ ಎರಡು ಕಾರುಗಳ ನಡುವೆ ಬೀಕರ ಅಪಘಾತ ನಡೆದು ಎಂಟು ಮಂದಿ ಗಾಯಗೊಂಡ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ 10.30 ರ ವೇಳೆಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚನ್ನಬಸಯ್ಯನಹಟ್ಟಿ ಗ್ರಾಮದ ಬಳಿ ಘಟನೆ ನಡೆದಿದ್ದು ಎಂಟು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು ಗಾಯಾಳುಗಳನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಧಾಖಲಿಸಲಾಗಿದೆ.