ಸಿಂಧನೂರು: RH ಕ್ಯಾಂಪ್ ನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಸಿಂಧನೂರಿನಲ್ಲಿ ಶವವಾಗಿ ಪತ್ತೆ
ಶನಿವಾರ 4 ಗಂಟೆ ಅಂಗಡಿ ಕೆಲಸ ಮುಗಿಸಿ ಮನೆಗೆ ಹೋಗಬೇಕಾದ ವ್ಯಕ್ತಿ ನಾಪತ್ತೆಯಾಗಿ, ಇಂದು ಶವವಾಗಿ ಪತ್ತೆಯಾಗಿದ್ದಾನೆ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದ್ದು, ಪ್ರಭೀರ ತಂದೆ ಗಣೇಶ ಸರ್ದಾರ 30 ಬಂಗಾಲಿ ಕ್ಯಾಂಪ 2 ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ನಗರದ ಇಂದಿರಾನಗರದ ಕಬ್ರಸ್ಥಾನ್ ಹತ್ತಿರ ಇರುವ ಬಳ್ಳಾರಿ ಲೇಔಟ್ ನಲ್ಲಿ ಕೊಲೆಯಾಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಾರದೆ ಪೋನ್ ಎತ್ತದೆ ಇರುವುದರಿಂದ ಅನುಮಾನಗೊಂಡು ಪೋಲೀಸ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರುನೀಡಿದ್ದರು.