ಹುಮ್ನಾಬಾದ್: ಕಲ್ಬುರ್ಗಿಯಲ್ಲಿ ಸಚಿವಾಲಯ ಸ್ಥಾಪಿಸಬೇಕೆಂಬ ಸಂಪುಟದ ನಿರ್ಧಾರ ಅಭಿನಂದನಾರ್ಹ :ಹಳ್ಳಿಖೇಡ (ಬಿ)ದಲ್ಲಿ ಹಿರಿಯ ಜೀವಿ ಕೇಶವರಾವ್ ತಳಘಟಕರ್
Homnabad, Bidar | Sep 17, 2025 ಕಲ್ಬುರ್ಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂಬ ಸಚಿವ ಸಂಪುಟದ ನಿರ್ಧಾರ ಅತ್ಯಂತ ಅಭಿನಂದನಾರ್ಹ ಎಂದು ಹಿರಿಯ ಜೀವಿ ಹಾಗೂ ಬಸವ ಸಮಿತಿಯ ಉಪಾಧ್ಯಕ್ಷ ಕೇಶವರಾವ್ ತಲಘಟಕರ್ ಅಭಿಪ್ರಾಯಪಟ್ಟರು. ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದಲ್ಲಿ ನಾಗರಿಕ ಸಮಿತಿ ವತಿಯಿಂದ ಬುಧವಾರ ಬೆಳಿಗ್ಗೆ 10:30 ಕ್ಕೆ ಆಯೋಜಿಸಿದ ಕಲ್ಯಾಣ ಕರ್ನಾಟಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪ ನ್ಯಾಸ ಮಂಡಿಸಿದರು.