ಚಾಮರಾಜನಗರ: ಆಸನೂರು ಬಳಿ ಲಾರಿ ಪಲ್ಟಿ... ರಸ್ತೆ ತುಂಬಾ ಎಳನೀರು ಚೆಲ್ಲಾಪಿಲ್ಲಿ..!
ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆಬದಿ ಪಲ್ಟಿಯಾದ ಘಟನೆ ಚಾಮರಾಜನಗರ ಗಡಿಭಾಗವಾದ ಆಸನೂರು ಬಳಿ ನಡೆದಿದೆ. ಚಾಮರಾಜನಗರದಿಂದ ಸತ್ಯಮಂಗಲಕ್ಕೆ 2000 ಅಧಿಕ ಎಳನೀರನ್ನು ಸಾಗಿಸುತ್ತಿದ್ದಾಗ ಆಸನೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಗೆ ಪಲ್ಟಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 2000 ಕ್ಕೂ ಅಧಿಕ ಎಳನೀರು ರಸ್ತೆ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಸಂಚಾರಕ್ಕೂ ಅಡೆತಡೆ ಉಂಟಾಯಿತು.