ಬಾಗೇಪಲ್ಲಿ: ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ,ಪಟ್ಟಣದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸರೆಡ್ಡಿ
ಬಾಗೇಪಲ್ಲಿ ಪಟ್ಟಣದ ಪಿ ಎಲ್ ಡಿ ಬ್ಯಾಂಕಿನ ಆವರಣದಲ್ಲಿ ಭಾನುವಾರ 85ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀನಿವಾಸ ರೆಡ್ಡಿಯವರು ಮಾತನಾಡಿ,ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಾಲ ಕಾಲಕ್ಕೆ ಸಾಲ ಮರುಪಾವತಿ ಮತ್ತು ಬಡ್ಡಿ ಸಮೇತ ಹಣಕಾಸಿನ ವ್ಯವಹಾರವನ್ನ ಪಡೆಯುತ್ತಿವೆ. ಆದರೆ ಪಿ ಎಲ್ ಡಿ ಬ್ಯಾಂಕ್ ನಲ್ಲಿ ಸಾಲ ಪಡೆದಂತ ರೈತರು ಸಾಲ ಮನ್ನಾ ಆಗುತ್ತದೆ ಎಂದು ಮರುಪಾವತಿ ಮಾಡುವುದನ್ನು ವಿಳಂಬ ಮಾಡುವುದರಿಂದ ನಷ್ಟದಲ್ಲಿ ಸಾಗುತ್ತಿವೆ ಎಂದರು. ಹಾಗಾಗಿ ಸಕಾಲದಲ್ಲಿ ರೈತರು ಸಾಲವನ್ನ ಮರುಪಾವತಿ ಮಾಡಿ ಎಂದು ತಿಳಿಸಿದರು.