ಚಿಕ್ಕಬಳ್ಳಾಪುರ: 2033ಕ್ಕೆ ಚಿಕ್ಕಬಳ್ಳಾಪುರಕ್ಕೆ ನಮ್ಮ ಮೆಟ್ರೋ ನಗರದಲ್ಲಿ ಶಾಸಕ ಪ್ರದೀಪ್ ಈಶ್ವರ್
2033ರ ಹೊತ್ತಿಗೆ ಬೆಂಗಳೂರಿನ ನಮ್ಮ ಮೆಟ್ರೋ ರೈಲು ಯೋಜನೆಯು ಚಿಕ್ಕಬಳ್ಳಾಪುರದವರೆಗೆ ವಿಸ್ತರಣೆಯಾಗಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸೆ. 28ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2033ರೊಳಗೆ ಚಿಕ್ಕಬಳ್ಳಾಪುರಕ್ಕೆ ನಮ್ಮ ಮೆಟ್ರೋ ರೈಲು ತರುವುದು ನಿಶ್ಚಿತ. ಅದಲ್ಲದೆ, ಜಿಲ್ಲೆಯ ಸಂಪರ್ಕಗಳನ್ನು ಮತ್ತ,ಷ್ಟು ಹೆಚ್ಚಿಸುತ್ತೇನೆ. ಹಾಗಾಗಿ, ಚಿಕ್ಕಬಳ್ಳಾಪುರದ ಜನರು ತಮ್ಮ ಜಮೀನುಗಳನ್ನು ರಿಯಲ್ ಎಸ್ಟೇಟ್ ನವರ ಒತ್ತಡಕ್ಕೆ ಮಣಿದು ಮಾರಾಟ ಮಾಡಬೇಡಿ ಎಂದರು.