ಬಳ್ಳಾರಿ: ನಗರದಲ್ಲಿ 7ನೇ ತರಗತಿ ವಿದ್ಯಾರ್ಥಿ ನಾಪತ್ತೆ, ಪತ್ತೆಗೆ ಪೊಲೀಸರು ಮನವಿ
ಶಾಲೆಗೆ ಹೋಗಿಬರುತ್ತೇನೆಂದು ಮನೆಯಿಂದ ಹೊರಗಡೆ ಹೋದ ವಿದ್ಯಾರ್ಥಿ ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾನೆಂದು ಗಾಂಧಿನಗರ ಪೊಲೀಸರು ತಿಳಿಸಿದ್ದಾರೆ. ಗಾಂಧಿನಗರ ಪೊಲೀಸ್ ಠಾಣಾಯಲ್ಲಿ ಶನಿವಾರ ರಾತ್ರಿ 9:15ಕ್ಕೆ ಪ್ರಕರಣ ದಾಖಲಾಗಿದೆ. ಗಾಂಧಿನಗರ ವ್ಯಾಪ್ತಿಯಲ್ಲಿ ಬರುವ ಪಟೇಲ್ ನಗರದ 2ನೇ ಕ್ರಾಸ್ನ ನಿವಾಸಿ ಮೂಲತಃ ಆಂಧ್ರಪ್ರದೇಶದ ಡೊಣೇಕಲ್ ಗ್ರಾಮದ ಜೆ.ಮಧುಮೋಹನ್ರವರ ಪುತ್ರ ಹೇಮಂತನು ನಗರದ ವಂಕಿ ಮರಿಸಿದ್ದಮ್ಮ ಅಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸದರಿ ವಿದ್ಯಾರ್ಥಿ ಜೂ.4ರಂದು ಬೆಳಿಗ್ಗೆ ಶಾಲೆಗೆ ಹೋಗಿ ಮನೆಯಿಂದ ಬರುತ್ತೇನೆಂದು ಹೊರಗಡೆ ಹೋದವ ಮರಳಿ ಮನೆಗೆ ನಿವಾಸಿ ಬಾರದೇ ಕಾಣೆಯಾಗಿದ್ದಾನೆ..