ಅಫಜಲ್ಪುರ: ಕಬ್ಬು ಬೆಳೆಗಾರರಿಂದ ಅಫಜಲಪುರ ಪಟ್ಟಣ ಬಂದ್; ಹೇಗಿತ್ತು ಗೊತ್ತಾ ರೈತರ ಬಂದ್ ಕಿಚ್ಚು?
ಕಲಬುರಗಿ : ಕಬ್ಬಿಗೆ ದರ ನಿಗದಿ ಮಾಡುವಂತೆ ಆಗ್ರಹಿಸಿ ಇಂದು ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣ ಬಂದ್ಗೆ ಕರೆ ನೀಡಲಾಗಿತ್ತು.. ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ವತಿಯಿಂದ ಕರೆ ನೀಡಲಾಗಿರೋ ಬಂದ್ನಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸಿದರು.. ನವೆಂಬರ್ 10 ರಂದು ಮಧ್ಯಾನ 1 ಗಂಟೆಗೆ ಪ್ರತಿಭಟನೆ ನಡೆಸುದರು. ಇನ್ನೂ ಟನ್ ಕಬ್ಬಿಗೆ ಸರ್ಕಾರ ₹3500 ರ ದರ ನಿಗದಿ ಮಾಡಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ.. ಇನ್ನೂ ಕಳೆದ ನಾಲ್ಕೈದು ದಿನಗಳಿಂದ ಕಬ್ಬಿಗೆ ದರ ನಿಗದಿ ಮಾಡಬೇಕೆಂದು ಒತ್ತಾಯಿಸಿ ಧರಣಿ ನಡೆಸಲಾಗ್ತಿದೆ.