ಶಹಾಪುರ: ಕೊಡಮನಹಳ್ಳಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಕುಳಿತು ಮಕ್ಕಳ ಓದು, ಹೋರಾಟಗಾರ ಶಿವಪುತ್ರ ಜವಳಿ ಅಸಮಾಧಾನ
Shahpur, Yadgir | Sep 16, 2025 ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಡಮನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣ ಮಳೆ ಬಂದರೆ ನೀರು ಶಾಲೆಯಲ್ಲಿ ಬರುವುದರಿಂದ ವಿದ್ಯಾರ್ಥಿಗಳ ಓದಿಗೆ ತುಂಬಾ ತೊಂದರೆ ಉಂಟಾಗಿದೆ. ಸೋಮವಾರ ಮಧ್ಯಾಹ್ನ ಶಾಲೆಯಲ್ಲಿನ ಮಕ್ಕಳು ಗ್ರಾಮದ ದೇವಸ್ಥಾನದಲ್ಲಿ ರಸ್ತೆ ಪಕ್ಕದಲ್ಲಿ ಕುಳಿತು ಪಾಠ ಕಲಿಯುವಂಥದ್ದು ಕೂಡಲೇ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಅಲ್ಲಿಯವರೆಗೆ ಬೇರೊಂದು ವ್ಯವಸ್ಥೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಿಜಿ ಸಾಗರ ಬಣದ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಒತ್ತಾಯಿಸಿದ್ದಾರೆ