ಇಳಕಲ್: ನವ್ಹಂಬರ್ದಲ್ಲಿ ಐಪಿಎಲ್ ಪ್ರಾರಂಭ : ನಗರದಲ್ಲಿ ತಟಗಾರ ಸುದ್ದಿಗೋಷ್ಠಿ
Ilkal, Bagalkot | Oct 20, 2025 ಹುನಗುಂದ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ನವೆಂಬರ್ದಲ್ಲಿ ನಗರದ ಆರ್. ವೀರಮಣಿ ಕ್ರೀಡಾಂಗಣದಲ್ಲಿ ಐಪಿಎಲ್-ಪ್ರಾರಂಭಗೊಳ್ಳುತ್ತಿದೆ ಎಂದು ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ ಹೇಳಿದರು. ಇಳಕಲ್ಲದ ಎಸ್.ಆರ್.ಕೆ ಕಚೇರಿಯಲ್ಲಿ ಮಧ್ಯಾಹ್ನ ೧೨ ಗಂಟೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಾಸಕ ವಿಜಯಾನಂದ ಕಾಶಪ್ಪನವರ ಹುನಗುಂದ ಮತಕ್ಷೇತ್ರದಲ್ಲಿ ಕ್ರೀಡೆಯಲ್ಲಿ ಆಸಕ್ತಿಯಿರುವ ಯುವಕರ ಪ್ರತಿಭೆ ತೋರಿಸಲು 'ಐಪಿಎಲ್' ಪಂದ್ಯಾವಳಿಯನ್ನು ಸತತ ೮ ವರ್ಷಗಳಿಂದ ಹಮ್ಮಿಕೊಂಡು ಬರುತ್ತಿದ್ದಾರೆ. ನವ್ಹಂಬರ್ದಲ್ಲಿ ಐಪಿಎಲ್-೯ ಪ್ರಾರಂಭಗೊಳ್ಳುತ್ತಿದ್ದು, ಈ ಸಲದ ಕ್ರಿಕೆಟ್ನಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಪ್ರಥಮ ಬಹುಮಾನ ೨